ಮ್ಯಾಗ್ನಮ್ ಡಿಸ್ಟ್ರಿಬ್ಯುಟರ್ಸ್ ರವರ ಗೌಪ್ಯತಾ ನೀತಿ

ಈ ಗೌಪ್ಯತಾ ನೀತಿಯು 29 ಮಾರ್ಚ್ 2019 ರಂದು ಬದಲಾಯಿಸಲಾಯಿತು.

ಸ್ನ್ಯಾಕಿಟ್ ನಲ್ಲಿ https://snakit.in/ ಎಲ್ಲಾ ಅಂಶಗಳಿಗಿಂತ ನಾವು ಪ್ರಾಮುಖ್ಯತೆ ನೀಡುವ ಮುಖ್ಯವಾದ ಅಂಶ, ನಮ್ಮ ಸಂದರ್ಶಕರ ಗೌಪ್ಯತೆ. ವೀ ಗೌಪ್ಯತಾ ನೀತಿಯ ಕಾಯಿದೆಯು ನಮ್ಮ ಸ್ನ್ಯಾಕಿಟ್ ಕಂಪನಿ ಸಂಗ್ರಹಿಸಿರುವ ಮತ್ತು ಬಳಸುವ ವಿವಿಧ ಮಾಹಿತಿಯನ್ನು ಒಳಗೊಂಡಿರುತ್ತದೆ.

ನಿಮಗೆ ನಮ್ಮ ಗೌಪ್ಯತಾ ನೀತಿಯ ಬಗ್ಗೆ ಏನಾದರೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನಮ್ಮ ಇಮೇಲ್ ಐಡಿ info@snakit.in

ಲಾಗ್ ಫೈಲ್

ನಮ್ಮ ಸ್ನ್ಯಾಕಿಟ್ ಕಂಪನಿ ಲಾಗ್ ಫೈಲ್ ಗಳನ್ನು ಬಳಸುವ ಪ್ರಾಮಾಣಿಕ ವಿಧಾನವನ್ನು ಪಾಲಿಸುತ್ತದೆ. ಈ ಫೈಲ್ ಗಳನ್ನು ಎಲ್ಲಾ ಕಂಪನಿಗಳು ಬಳಸುತ್ತವೆ ಮತ್ತು ಆತಿಥ್ಯ ಸೇವೆಯನ್ನು ಒದಗಿಸುವ ಕಂಪನಿಗಳು ಸಹ ಇದನ್ನು ಬಳಸುತ್ತವೆ. ಲಾಗ್ ಫೈಲ್ ಗಳಲ್ಲಿ ದಾಖಲಿಸುವ ಮಾಹಿತಿ ಯಾವುವೆಂದರೆ, ಐಪಿ ಅಡ್ರೆಸ್ (ಇಂಟರ್ನೆಟ್ ಪ್ರೋಟೋಕಾಲ್) , ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ (ಐಎಸ್ ಪಿ), ದಿನಾಂಕ ಮತ್ತು ಸಮಯದ ಗುರುತು, ಉಲ್ಲೇಖಿಸುವ ಮತ್ತು ಹೊರಬರುವ, ಕಾಗದ ಮತ್ತು ಎಷ್ಟು ಬಾರಿ ನಾವು ಅದನ್ನು ಬಳಸಿದ್ದೇವೆ ಎಂಬುದನ್ನು ಒಳಗೊಂಡಿರುತ್ತದೆ. ಈ ಅಂಶಗಳು ಯಾವುದೇ ವಿಧವಾದ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುವುದಿಲ್ಲ. ಈ ಎಲ್ಲಾ ಮಾಹಿತಿಯ ಮುಖ್ಯ ಉದ್ದೇಶ, ಪ್ರವೃತ್ತಿಯನ್ನು ವಿಶ್ಲೇಶಿಸುವುದು, ನಮ್ಮ ವೆಬ್ ಸೈಟ್ ಅನ್ನು ನಿರ್ವಹಿಸುವುದು, ನಮ್ಮ ವೆಬ್ ಸೈಟ್ ನಲ್ಲಿ ಜಾಲಾಡುವವರನ್ನು ಪತ್ತೆಹಚ್ಚುವುದು ಮತ್ತು ಜನಸಂಖ್ಯಾ ಮಾಹಿತಿಯನ್ನು ಒಳಗೊಂಡಿರುತ್ತದೆ.

ಕುಕೀಸ್ ಮತ್ತು ವೆಬ್ ಬೀಕನ್

ಇತರೆ ಎಲ್ಲಾ ವೆಬ್ ಸೈಟ್ ಗಳಂತೆ ಸ್ನ್ಯಾಕಿಟ್ ಸಹ "ಕುಕ್ಕೀಸ್" ಅನ್ನು ಬಳಸುತ್ತದೆ. ಈ ಕುಕ್ಕೀಸ್ ನಮ್ಮ ಸಂದರ್ಶಕರಿಗೆ ಬೇಕಾದ ಮಾಹಿತಿಯನ್ನು ಉಳಿಸಿಟ್ಟುಕೊಳ್ಳುತ್ತದೆ ಮತ್ತು ನಮ್ಮ ಸಂದರ್ಶಕರು ಹಿಂದೆ ವೀಕ್ಷಿಸಿದಂಥ ವೆಬ್ ಸೈಟ್ ಗಳ ವಿವರಗಳನ್ನೂ ಸಹ ಒಳಗೊಂಡಿರುತ್ತದೆ. ಈ ಮಾಹಿತಿಯು ನಮ್ಮ ವೆಬ್ ಸೈಟ್ ಬಳಸುವ ಗ್ರಾಹಕರಿಗೆ ಅನುಕೂಲಕರವಾಗಿರುವಂತಹ, ಅವರು ಬಳಸುವ ಬ್ರೌಸರ್ ಗಳಿಗೆ ಸೂಕ್ತವಾಗಿರುವಂತೆ ಮಾಡಿದ್ದೇವೆ.

ಗೌಪ್ಯತಾ ನೀತಿಗಳು

ನಮ್ಮ ಎಲ್ಲಾ ಜಾಹೀರಾತು ಪಾಲುದಾರರ ಗೌಪ್ಯತಾ ನೀತಿಯನ್ನು ತಿಳಿದುಕೊಳ್ಳಲು ಈ ಪಟ್ಟಿಯನ್ನು ನೀವು ಪರಿಶಿಲಿಸಬಹುದು.

ನಮ್ಮ ವೆಬ್ ಸೈಟ್ ಅನ್ನು ಬಳಸುವ ಎಲ್ಲಾ ಜನರಿಗೆ ಮೂರನೇ ವ್ಯಕ್ತಿಯ ಜಾಹೀರಾತು ಸರ್ವರ್ ಗಳು ಮತ್ತು ನೆಟ್ ವರ್ಕ್ ಗಳು ಬಳಸುವಂತಹ ಕುಕ್ಕೀಸ್ , ಜಾವಾಸ್ಕ್ರಿಪ್ಟ್ ಮತ್ತು ವೆಬ್ ಬೀಕನ್ಸಸ್ ಅನ್ನು ಕಳುಹಿಸಿತ್ತೇವೆ. ಇವು ಸ್ವಯಂಚಾಲಿತವಾಗಿ ನಿಮ್ಮ ಐಪಿ ಅಡ್ರೆಸ್ ಅನ್ನು ಪಡೆದುಕೊಳ್ಳುತ್ತದೆ. ಈ ತಂತ್ರಜ್ಞಾನವು ಇವರ ಜಾಹೀರಾತಿನ ಪರಿಣಾಮವನ್ನು ಅಳೆಯಲು ನಮಗೆ ಸಹಾಯ ಮಾಡುತ್ತವೆ.

ನಿಮ್ಮ ಗಮನಕ್ಕೆ ,ಮೂರನೆಯ ವ್ಯಕ್ತಿ, ಮಧ್ಯಸ್ಥರು ನೀಡಿರುವ ಜಾಹೀರಾತು, ಕುಕ್ಕೀಸ್ ಗಳಿಗೂ ಸ್ನ್ಯಾಕಿಟ್ ಗೂ ಯಾವುದೇ ವಿಧವಾದ ನಿಯಂತ್ರಣ ಮತ್ತು ಪ್ರವೇಶ ಇರುವುದಿಲ್ಲ.

ಮೂರನೇ ವ್ಯಕ್ತಿ ಮಧ್ಯಸ್ಥಿಕೆಯ ಗೌಪ್ಯತಾ ನೀತಿ

ಸ್ನ್ಯಾಕಿಟ್ ನ ಗೌಪ್ಯತಾ ನೀತಿ ಕಾಯಿದೆಯು ಇತರೆ ವೆಬ್ ಸೈಟ್ ಮತ್ತು ಜಾಹೀರಾತು ವಿತರಕರಿಗೆ ಅನ್ವಯಿಸುವುದಿಲ್ಲ. ಹಾಗಾಗಿ ನಾವು ನಿಮಗೆ ತಿಳಿಸಲು ಇಚ್ಛಿಸುವುದು ಏನೆಂದರೆ ಈ ಮೂರನೇ ವ್ಯಕ್ತಿ ಮಧ್ಯಸ್ಥಿಕೆಯ ಜಾಹೀರಾತು, ಸರ್ವರ್ಗಳ ವಿಷಯವಾಗಿ ಹೆಚ್ಚಾಗಿ ತಿಳಿದುಕೊಳ್ಳಲು ಅವರವರ ಆಯಾ ಗೌಪ್ಯತಾ ನೀತಿ ಮಾಹಿತಿಯನ್ನು ಓದಿರಿ. ಈ ಮಾಹಿತಿಯು ಅವರು ಯಾವ ರೀತಿ ಕೆಲವೊಂದು ವಿಷಯಗಳನ್ನು ಹೊರಗೆಳೆಯುತ್ತಾರೆ ಎಂಬುದನ್ನು ತಿಳಿಸುತ್ತದೆ. ಗೌಪ್ಯತಾ ನೀತಿಯ ಎಲ್ಲಾ ವಿವರಗಳು ಈ ಲಿಂಕ್ ನಲ್ಲಿ ದೊರೆಯುತ್ತದೆ.

ನಿಮ್ಮ ಸ್ವಯಂ ಬ್ರೌಸರ್ ನ ಮೂಲಕ ಬೇಡವಾದ ಕುಕ್ಕೀಸ್ ಅನ್ನು ನೀವು ಅಶಕ್ತಗೊಳಿಸಬಹುದು. ನಿರ್ದಿಷ್ಟವಾದ ವೆಬ್ ಬ್ರೌಸರ್ ಗಳ ಕುಕ್ಕೀಸ್ ಮ್ಯಾನೇಜ್ಮೆಂಟ್ ನ ವಿಷಯವಾಗಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಆಯಾ ಬ್ರೌಸರ್ ಗಳ ವೆಬ್ ಸೈಟ್ ನಲ್ಲಿ ಕೊಡಲ್ಪಟ್ಟಿರುತ್ತದೆ. ಕುಕ್ಕೀಸ್ ಎಂದರೇನು ?

ಮಕ್ಕಳಿಗಾಗಿ ಮಾಹಿತಿ

ನಮ್ಮ ಮತ್ತೊಂದು ಮುಖ್ಯ ಉದ್ದೇಶ ಮಕ್ಕಳು ಜಾಲತಾಣವನ್ನು ಉಪಯೊಗಿಸುವಾಗ ಅವರಿಗೆ ಸುರಕ್ಷತೆಯನ್ನು ಕಲ್ಪಿಸುವವುದು. ಪೋಷಕರಿಗೆ ಮತ್ತು ಆರಕ್ಷಕರಿಗೆ ನಾವು ತಿಳಿಸುವುದೇನೆಂದರೆ, ನಿಮ್ಮ ಮಕ್ಕಳ ಜಾಲತಾಣದ ಎಲ್ಲಾ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿರಿ.

ಸ್ನ್ಯಾಕಿಟ್ ಯಾವುದೇ ಕಾರಣಕ್ಕೂ ೧೩ (ಹದಿಮೂರು) ವರ್ಷದ ಕೆಳಗಣ ವಯಸ್ಸಿನ ಮಕ್ಕಳ ವೈಯಕ್ತಿಕ, ಗುರುತಿಸಬಹುದಾದ ಮಾಹಿತಿಯನ್ನು ಎಂದಿಗೂ ಕೇಳುವುದಿಲ್ಲ. ಒಂದು ವೇಳೆ ನಿಮ್ಮ ಮಗು ಈ ಮಾಹಿತಿಯನ್ನು ನಮ್ಮ ವೆಬ್ ಸೈಟ್ ನಲ್ಲಿ ನಮೂದಿಸಿದೆ ಎಂಬುದು ನಿಮಗೆ ಅನಿಸಿದಲ್ಲಿ ತಕ್ಷಣವೇ ನಮ್ಮನ್ನು ಸಂಪರ್ಕಿಸಿ ತಿಳಿಸಿರಿ. ಅಂತಹ ಮಾಹಿತಿಯನ್ನು ನಮ್ಮ ದಾಖಲೆಗಳಿಂದ ತೆಗೆದುಹಾಕಲು ನಾವು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ.

ಆನ್ ಲೈನ್ ಗೌಪ್ಯತಾ ನೀತಿ

ಈ ಗೌಪ್ಯತಾ ನೀತಿಯು ಕೇವಲ ನಮ್ಮ ಆನ್ ಲೈನ್ ಚಟುವಟಿಕೆಗಳಿಗೆ ಮತ್ತು ನಮ್ಮ ಸ್ನ್ಯಾಕಿಟ್ ಕಂಪನಿಯ ವಿಷಯವಾಗಿ ಮಾಹಿತಿಯನ್ನು ಪಡೆಯಲು ಇಚ್ಚಿಸುವ ಸಂದರ್ಶಕರಿಗೆ ಮಾತ್ರ ಅನ್ವಯಿಸುತ್ತದೆ. ಈ ನೀತಿಯು ಇತರೆ ವೆಬ್ ಸೈಟ್ ಗಳ ಮುಖಾಂತರ ಮತ್ತು ಆಫ್ ಲೈನ್ ಮೂಲಗಳ ಮುಖಾಂತರ ಸಂಗ್ರಹಿಸಲಾದ ಮಾಹಿತಿಗಳಿಗೆ ಅನ್ವಯಿಸುವುದಿಲ್ಲ.

ಒಪ್ಪಿಗೆ

ಈ ವೆಬ್ ಸೈಟ್ ಅನ್ನು ಬಳಸುವ ಮುಖಾಂತರ, ನೀವು ನಮ್ಮ ಎಲ್ಲಾ ಗೌಪ್ಯತಾ ನೀತಿ ಕಾಯಿದೆಗೆ ಬಧ್ಧರಾಗಿದ್ದೀರಿ ಮತ್ತು ಅದರ ನಿಯಮಗಳು, ಷರತ್ತುಗಳು ನಿಮಗೂ ಅನ್ವಯಿಸುತ್ತವೆ.

ನಮ್ಮನ್ನು ಸಂಪರ್ಕಿಸಿರಿ

ನಿಮಗೆ ನಮ್ಮ ಗೌಪ್ಯತಾ ನೀತಿಯ ವಿಷಯದಲ್ಲಿ ಏನಾದರೂ ಪ್ರಶ್ನೆಗಳಿದ್ದಲ್ಲಿ, ಈ ಕೆಳಗಿನ ವಿಳಾಸದಲ್ಲಿ ನಮ್ಮನ್ನು ಸಂಪರ್ಕಿಸಬಹುದು.

ಮ್ಯಾಗ್ನಮ್ ಡಿಸ್ಟ್ರಿಬ್ಯೂಟರ್ಸ್ ಪ್ರೈವೇಟ್ ಲಿಮಿಟೆಡ್,

.ನಂ. 402, ಹೆಚ್ ಟಿ ಸಿ ಆಸ್ಪೈರ್, 19 , ಅಲಿ ಆಸ್ಕರ್ ರಸ್ತೆ,

ಬೆಂಗಳೂರು- 560052,

ಕರ್ನಾಟಕ, ಇಂಡಿಯಾ

ದೂರವಾಣಿ: +91 80 2263 8000

ಇ ಮೇಲ್: info@snakit.in