1978 ರಲ್ಲಿ ಪ್ರಾರಂಭವಾದ ನಮ್ಮ "ಸ್ನ್ಯಾಕಿಟ್" (SNAKIT) ಕಂಪನಿಯು ಮೊಟ್ಟ ಮೊದಲು ಆಹಾರ ಕ್ಷೇತ್ರದಲ್ಲಿ "ವಾರ್ಡನ್ ಬೇಕರಿ" (WARDEN BAKERY) ಎಂಬ ಹೆಸರಿನೊಂದಿಗೆ ದಕ್ಷಿಣ ಮುಂಬಯಿಯಲ್ಲಿ ಆರಂಭಿಸಲಾಯಿತು. ಕಾಲಕಳೆದಂತೆ ಸುತ್ತಮುತ್ತಲಿನ ಜನತೆಗೆ ತಮ್ಮ ಬೇಕರಿ ಉತ್ಪನ್ನಗಳು ಮತ್ತು ಖಾದ್ಯಗಳ ಮುಖಾಂತರ ಜನಪ್ರಿಯಗೊಂಡು ಮನೆಮಾತಾಗಿ ಬೆಳೆಯಿತು.
ಕಾಲಕ್ರಮೇಣ ಬೇಕರಿ ಉತ್ಪನ್ನಗಳ ಕ್ಷೇತ್ರದಲ್ಲಿ ನಮ್ಮ ಹೆಸರು ಬೆಳೆಯುತ್ತಿದ್ದಂತೆ ನಮ್ಮ ಮುಂದಿನ ದೊಡ್ಡ ಹೆಜ್ಜೆಯನ್ನಿಡಲು ನಾವು ನಿರ್ಧರಿಸಿದ್ದೇವು.
ಈ ನಿರ್ಧಾರ ಸ್ವಾದಿಷ್ಟಕರ ತಿನಿಸುಗಳ ವಿಷಯವಾಗಿ ನಮಗಿದ್ದಂತಹ ತಿಳುವಳಿಕೆಯ ನಿಮಿತ್ತ ಬಂದದ್ದಾಗಿತ್ತು. ನಮ್ಮ ಈ ಹೊಸ ಆಲೋಚನೆಯ ಪರಿಣಾಮವಾಗಿ ನಾವು "ಓ ಕೆ ವೇಫರ್ಸ್" (OK Wafers)ಎಂಬ ಒಂದು ಕಂಪನಿಯನ್ನು ಸ್ವಾಧೀನಪಡಿಸಿಕೊಂಡೆವು. ಅಂದಿನ ಕಾಲದಲ್ಲಿ ಈ ಒಂದು ಕಂಪನಿಯು ಮುಂಬಯಿಯಲ್ಲಿ ಬಹಳ ಪ್ರಖ್ಯಾತಿಗೊಂಡಿತ್ತು.
ದಶಕಗಳು ಕಳೆದಂತೆ, ಆಹಾರ ಕ್ಷೇತ್ರದಲ್ಲಿ ಹೆಸರುವಾಸಿಯಾದ ಉತ್ತಮ ಮತ್ತು ರಚನಾತ್ಮಕ ವ್ಯಕ್ತಿಗಳ ಆಲೋಚನೆಯ ಮೇರೆಗೆ ನಮ್ಮ ದೃಷ್ಟಿಕೋನ ಬದಲಾಗತೊಡಗಿತು. ಅಂತಿಮವಾಗಿ 2018 ರಲ್ಲಿ ಹೊಸ ಪೀಳಿಗೆಯ ಅಗತ್ಯತೆಗೆ ಅನುಗುಣವಾಗಿ ಒಂದು ಹೊಸ ಉತ್ಪನ್ನವನ್ನು ಪರಿಚಯಿಸಲು ಮುಂದಾಗಿದ್ದೇವೆ.
'ಸ್ನ್ಯಾಕಿಟ್' ( ENTER SNAKIT) ಎಂಬ ಒಂದು ಸ್ವಾದಿಷ್ಟವಾದ, ರುಚಿಕರವಾದ, ವಿಭಿನ್ನವಾಗಿ ರೂಪಿಸಿರುವ ಒಂದು ವಿಶೇಷ ಖಾದ್ಯವನ್ನು ನಿಮಗೆ ಪರಿಚಯಿಸಲಾಯಿತು. ನಮ್ಮ ಈ ಹೊಸ ಆವಿಷ್ಕಾರದ ಮೂಲಕ ನಾವು ಯಾವ ರೀತಿ ಆಹಾರ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲನ್ನು ಸ್ಥಾಪಿಸಿ, ಯಾವ ರೀತಿ ಮುಂದೆ ಸಾಗುತ್ತಿದ್ದೇವೆ ಎಂದು ತಿಳಿದುಕೊಳ್ಳುವುದಕ್ಕಾಗಿ ನಮ್ಮ "ಬ್ರ್ಯಾಂಡ್ ಫಿಲಾಸಫಿ" (BRAND PHILOSOPHY) ವಿಭಾಗಕ್ಕೆ ಭೇಟಿಕೊಡಿ.
'ಸ್ನ್ಯಾಕಿಟ್' (SNAKIT) ಕಂಪನಿ ಇತರೆ ಕಂಪನಿಗಳಿಗಿಂತ ಬಹಳ ವಿಭಿನ್ನವಾಗಿರಲು ಕಾರಣ ಮುಖ್ಯವಾಗಿ 5 ಅಂಶಗಳು - ಪ್ರಮಾಣಿತ, ಸುರಕ್ಷಿತ, ಆರೋಗ್ಯಕರ, ವಿಭಿನ್ನ ಹಾಗೂ ಉತ್ತಮ ಗುಣಮಟ್ಟ. ಈ ಐದು ಅಂಶಗಳು ಪ್ರಪಂಚದ ಇತರೆ ಕಂಪನಿಗಳು ಹಾಕಿರುವ ಎಲ್ಲ ಮೇರೆಗಳನ್ನು ದಾಟಿ ನಾವು ನಮ್ಮ ಭಾರತೀಯ ಖಾದ್ಯ ತಿನಿಸುಗಳ ಕ್ಷೇತ್ರದಲ್ಲಿ ಮುನ್ನುಗ್ಗಲು ಸಹಕಾರಿಯಾಗಿದೆ. ಮೆಟ್ರೋ ನಗರಗಳನ್ನು ಹೊರತುಪಡಿಸಿ ಇತರೆ ನಗರಗಳಲ್ಲಿ ಅಸಂಘಟಿತ ಕಂಪನಿಗಳ ಮಧ್ಯೆ ಈ ನಮ್ಮ ಐದು ಅಂಶಗಳು ನಮ್ಮನ್ನು ಮುನ್ನಡೆಸಲು ಸಹಕಾರಿಯಾಗಿವೆ.
'ಸ್ನ್ಯಾಕಿಟ್' (SNAKIT) ಮುಖಾಂತರ ನಮ್ಮ ಮುಖ್ಯ ಧ್ಯೇಯ ಒಂದು ಬಾರಿಗೆ ಒಂದು ಉತ್ತಮವಾದ ತಿನಿಸನ್ನು ನಮ್ಮ ಭಾರತದೇಶದ ಜನತೆಗೆ ಪರಿಚಯಿಸಲು ನಾವು ಆಶಿಸುತ್ತೇವೆ.
ನಮ್ಮ'ಸ್ನ್ಯಾಕಿಟ್' (SNAKIT) ನ ಪ್ರತಿಯೊಂದು ಪ್ಯಾಕೆಟ್ ನಲ್ಲಿ ನಮ್ಮ ಉತ್ತಮ ಗುಣಮಟ್ಟದ ನಿಮಿತ್ತವಾಗಿ ನಮ್ಮ ಗ್ರಾಹಕರು ಸಂತುಷ್ಟರಾಗುತ್ತಾರೆ ಎಂದು ನಾವು ನಂಬುತ್ತೇವೆ. ಈ ನಂಬಿಕೆಯ ಪರಿಣಾಮವಾಗಿಯೇ ನಮ್ಮ ಸ್ನ್ಯಾಕಿಟ್ SNAKIT ಉತ್ಪನ್ನಗಳನ್ನು ನಾವು ನಮ್ಮ ಗ್ರಾಹಕರಿಗೆ ಮೇಲೆ ತಿಳಿಸಿರುವ 5 ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪ್ರತಿಯೊಂದು ಉತ್ಪನ್ನವನ್ನು ನಾವು ವಿವೇಚಿಸಿ ಅಕ್ಕರೆಯಿಂದ ತಯಾರಿಸುತ್ತೇವೆ.
ಈ ತಿನಿಸುಗಳನ್ನು ಸವಿಯುವಾಗ 'ಶ್ರೇಷ್ಠತೆ' ಎಂಬ ಬದ್ಧತೆಯನ್ನು ಹೊಂದಿದವರಾಗಿ ನಮ್ಮ ಉತ್ಪನ್ನದಲ್ಲಿ ಪೋಷಣೆಗೆ ಪೂರಕವಾದ (ಶಕ್ತಿ ವರ್ಧಕ) ಅಂಶವನ್ನು ನಮ್ಮ ಗ್ರಾಹಕರಿಗೆ ತಲುಪಿಸಲು ಉತ್ಸುಕರಾಗಿದ್ದೇವೆ. ಈ ಅಂಶ ಆಹಾರದ ಇತರೆ ಅಂಶಗಳೊಂದಿಗೆ ಬೆರೆತು ಮಕ್ಕಳಿಗೆ ಉತ್ತಮ ಸ್ವಾದ ಕೊಡುವುದಲ್ಲದೆ ನಮ್ಮ ಸ್ನ್ಯಾಕಿಟ್ ಉತ್ಪನ್ನಗಳು ಉತ್ತಮ ರುಚಿ ಮತ್ತು ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ. ನಮ್ಮ ಉತ್ಪನ್ನಗಳ ಹೆಚ್ಚಿನ ವಿವರಗಳಿಗಾಗಿ ನಮ್ಮ ಕೆಳಗಿನ ಜಾಲತಾಣವನ್ನು ಭೇಟಿಕೊಡಿ https://www.snakit.in/snaps-standards/
