
ಉತ್ತಮವಾದ ಸ್ವಾದ ಒಳ್ಳೆಯ ನೆನಪುಗಳನ್ನುಂಟು ಮಾಡುತ್ತದೆ, ಅದು ಹೇಗೆ? ನಿಮಗೆ ಇಷ್ಟವಾದ ಆಹಾರದ ವಿಷಯದಲ್ಲಿ ಒಮ್ಮೆ ಯೋಚಿಸಿ ನೋಡಿರಿ. ಖಂಡಿತವಾಗಿ ಅದರ ಮೂಲಕ ನಿಮ್ಮ ಹಳೆಯ ನೆನಪುಗಳು ಪದೇ ಪದೇ ಮರುಕಳಿಸುತ್ತವೆ.
ನಮ್ಮ ಸ್ನ್ಯಾಕಿಟ್ ಕಥೆಯ ವಿಚಾರದಲ್ಲಿ ನೀಲ್ ಎಂಬ ಒಬ್ಬ ನಾಯಕನ ಬಹುಮುಖ ಪಾತ್ರವಿದೆ. ಆತನ ಪ್ರಾವೀಣ್ಯತೆ ನಮ್ಮ ಉತ್ಪನ್ನಗಳ ವಿವಿಧ ಸ್ವಾದಗಳ ಜೊತೆ ಜೊತೆಯಲ್ಲಿ ಸಾಗುತ್ತವೆ. ಶ್ರೀಕೃಷ್ಣ ನಿಂದ ಸ್ಪೂರ್ತಿಯನ್ನು ಪಡೆದ ನೀಲ್'ನ ಕಥೆಗಳು ನಮ್ಮ ಪ್ರತಿಯೊಂದು ಉತ್ಪನ್ನಗಳ ಹಿಂದೆ ಒಂದು ಕಥಾ ರೂಪಕವಾಗಿ ದಾಖಲಿಸಿದ್ದೇವೆ. ಈ ಮೂಲಕ ಮಕ್ಕಳಿಗೆ ನೈತಿಕ ಪಾಠಗಳನ್ನು ಕಲಿಸುವುದು ಮಾತ್ರವಲ್ಲದೆ, ಬೆಳೆಯುವ ಮಕ್ಕಳಿಗೆ ಜೀವನದ ಸವಾಲುಗಳನ್ನು ಎದುರಿಸುವಂತಹ ಆತ್ಮ ಸ್ಥೈರ್ಯವನ್ನು ತುಂಬಲು ಪ್ರಯತ್ನಿಸುತ್ತಿದ್ದೇವೆ.
ಪ್ರತಿಯೊಂದು ಕಥೆಯು ಮಕ್ಕಳ ದೃಷ್ಟಿಯಲ್ಲಿ ಕೇವಲ ಕಥೆಯಾಗಿ ಉಳಿಯದೆ ಅದು ಒಂದು ಸಂಗ್ರಹಿಸಬಹುದಾದ ಧನಾತ್ಮಕ ಹಾಗೂ ಸದ್ಗುಣದ ವಸ್ತುವಾಗಿ ಪರಿಣಮಿಸುತ್ತದೆ. ನೀಲ್ ಒಬ್ಬ ತುಂಟನಾಗಿಯೂ ಸಹ ತನ್ನ ಪಾತ್ರಕ್ಕೆ ತಕ್ಕಂತೆ ನಡೆದುಕೊಳ್ಳುವುದರಿಂದ ನಿಜ ಜೀವನಕ್ಕೆ ಮತ್ತಷ್ಟು ಹತ್ತಿರವಾಗುತ್ತದೆ.
